ಸೋಷಿಯಲ್ ಮೀಡಿಯಾದಲ್ಲಿ ಲೈಕ್, ಕಮೆಂಟ್, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಅಶ್ಲೀಲ ವಿಡಿಯೋ ತುಣುಕು ಹಾಗೂ ಪೋಟೋಗಳನ್ನ ಹಾಕಿ, ಪೂರ್ತಿ ವಿಡಿಯೋ ಬೇಕಾದ್ರೆ ತಮ್ಮ ಖಾತೆಗಳನ್ನ ಫಾಲೋ ಮಾಡುವಂತೆ ಪೋಸ್ಟ್ ಮಾಡುತ್ತಿದ್ದವರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ಶ್ರೀಹರ್ಷ ಎಂಬುವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಸೋಮವಾರ 28 ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಪೋಸ್ಟ್ಗಳನ್ನ ಸಂಗ್ರಹಿಸಿದ್ದು, ವಿಡಿಯೋ ಮಾಡಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.