ಬೈಲಹೊಂಗಲ: ಬೈಲಹೊಂಗಲ ಪಟ್ಟಣದಲ್ಲಿ ವಿಶ್ವ ಹಿಂದೂಪರಿಷದ್ ಬಜರಂಗದಳ ವತಿಯಿಂದ ಹನ್ನೊಂದನೇ ವರ್ಷದ ದೌಡ ಆಚರಣೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಇಂದು ಸೋಮವಾರ 1 ಗಂಟೆಗೆ ಏಳನೇ ದಿವಸದ ದೌಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಬೈಲಹೊಂಗಲ ಪಟ್ಟಣದಿಂದ ನಂದೇಮ್ಮಾ ನಗರದ ನಂದೇಮ್ಮಾ ದೇವಿ ದೇವಸ್ಥಾನದಲ್ಲಿ ದೇವಿಗೆ ಮಹಾ ಮಂಗಳಾರತಿಯೊಂದಿಗೆ ಶಸ್ತ್ರ ಪೂಜೆ ಸಲ್ಲಿಸಿ ದೌಡ್ ಸಂಚಲನ ಪ್ರಾರಂಭವಾಗಿ ಶಟಗಾರ ಚಾಳ, ಶಿಕ್ಷಕರ ಚಾಳ, ಶ್ರೀ ದಾನಮ್ಮ ದೇವಿ ದೇವಸ್ಥಾನ ರಸ್ತೆಯ ಮುಖಾಂತರ ಚನ್ನಮ್ಮ ನಗರ ಮಾರ್ಗವಾಗಿ ಶರಣ ಮಾರ್ಗ, ಸತ್ಯ ಮಾರ್ಗ,ಗೊರವರ ಕಾಲೋನಿ ಮುಖಾಂತರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದವರೆಗೆ ಅದ್ದೂರಿ ದೌಡ ಮೂಲಕ ಮುಕ್ತಾಯವಾಗಿದ್ದು ಈ ಸಂದರ್ಭದಲ್ಲಿ ಯುವಕರು, ಯುವತಿಯರು, ಮಹಿಳೆಯರು,ಮಕ್ಕಳು ಭಾಗಿಯಾಗಿದ್ದರು