ದಾವಣಗೆರೆ: ನಮ್ಮ ಅಣ್ಣ ಸಲ್ಲಿಸಿರುವ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಹೇಳುವೆ: ನಗರದಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ
ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಡಾ. ಎಂಪಿ ದ್ವಾರಕೇಶ್ವರಯ್ಯ ಅವರಿಗೆ ಚುನಾವಣೆ ಕಣದಿಂದ ನಾಮಪತ್ರ ಹಿಂಪಡೆಯುವಂತೆ ಹೇಳುವೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದರು. ಅವರು, ಲೋಕಸಭಾ ಚುನಾವಣೆಗೆ ಅವರ ಅಣ್ಣ ಸ್ಪರ್ಧಿಸುವ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ನಮಗೆ ಎಸ್ಸಿ ಪ್ರಮಾಣ ಪತ್ರ ಬೇಡ. ಸಮಾಜ ನಮಗೆ ನೀಡುತ್ತಿರುವ ಗೌರವ ಸಾಕು. ಅದರಿಂದ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದರು. ಈ ಹಿಂದೆ ನನ್ನ ಮಗಳ ಮೇಲೆ ಈ ರೀತಿಯ ಆಪಾದನೆ ಬಂದಿತ್ತು ಎಂದು ಹೇಳಿದರು.