ಕಲಬುರಗಿ: ಶಾಂತಿಸಭೆಯಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ: ನಗರದಲ್ಲಿ ಬಿಜೆಪಿ ಮುಖಂಡ ಅಂಬರಾಯ್ ಅಷ್ಟಗಿ ಆರೋಪ
ಕಲಬುರಗಿ : ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ನನ್ನ ಮೇಲೆ ಕೆಲವರು ಅಧಿಕಾರಿಗಳ ಸಮ್ಮುಖದಲ್ಲಿ ಹಲ್ಲೆಗೆ ಯತ್ನಿಸಿದ್ದಾರೆಂದು ಬಿಜೆಪಿ ಮುಖಂಡ ಅಂಬರಾಯ್ ಅಷ್ಟಗಿ ಆರೋಪಿಸಿದ್ದಾರೆ.. ಅ28 ರಂದು ಮಧ್ಯಾನ 3 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಶಾಂತಿ ಸಭೆಗೆ ನಾನು ಆರ್‌ಎಸ್‌ಎಸ್ ಪ್ರತಿನಿಧಿಯಾಗಿ ಭಾಗಿಯಾಗಿದ್ದೆ. ಆರ್‌ಎಸ್‌ಎಸ್ ಪಥಸಂಚಲನ ಪರ ಮಾತನಾಡ್ತಿರೋವಾಗ ಸಭೆಯಲ್ಲಿದ್ದ ಕೆಲವರು ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರೆಂದು ಅಂಬರಾಯ್ ಅಷ್ಟಗಿ ಕಿಡಿಕಾರಿದ್ದಾರೆ.