ಕೊಪ್ಪ: ಕೆಎಸ್ಆರ್ಟಿಸಿ ಬಸ್ - ಕಾರು ನಡುವೆ ಅಪಘಾತ.! ಜಯಪುರದಲ್ಲಿ ಅಪಘಾತದಿಂದ ಕೆಲಕಾಲ ಟ್ರಾಫಿಕ್ ಜಾಮ್.!
ಕೆಎಸ್ಆರ್ಟಿಸಿ ಬಸ್ - ಕಾರು ನಡುವೆ ಅಪಘಾತ ಸಂಭವಿಸಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಜಯಪುರದ ಶೃಂಗೇರಿ ಸರ್ಕಲ್ ನಲ್ಲಿ ರಸ್ತೆ ಕಿರಿದಾಗಿರುವ ಕಾರಣ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.