ಕುಮಟಾ: ಗೋಕರ್ಣದ ಕಡಲ ತೀರದಲ್ಲಿ ಸಂಭ್ರಮದಿಂದ ನಡೆದ ಶಿವ-ಗಂಗೆಯರ ವಿವಾಹ
ದಕ್ಷಿಣ ಕಾಶಿಯೆಂದೇ ಖ್ಯಾತಿಯಾದ ಗೋಕರ್ಣ ಕಡಲತೀರದಲ್ಲಿ ಪ್ರತಿ ವರ್ಷ ಶಿವ-ಗಂಗೆಯರ ವಿವಾಹ ನಡೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ನರಕ ಚತುರ್ದಶಿಯಂದು ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಸಮೀಪದ ಕಡಲ ತೀರದಲ್ಲಿ ಶಿವ-ಗಂಗೆಯರ ವಿವಾಹ ಕಾರ್ಯ ಸೋಮವಾರ ಮಧ್ಯಾಹ್ನ 12.30ಕ್ಕೆ ನಡೆಯಿತು. ಸಂದರ್ಭದಲ್ಲಿ ಸಾವಿರಾರು ಜನರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿ, ವಿಶೇಷ ಪೂಜಾ ಕಾರ್ಯ ನಡೆಸಿದರು.