ಅಬ್ಬಿನಹೊಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕುರಿ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ರಾತ್ರಿ 9 ಗಂಟೆಗೆ ಈ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಲಕ್ಷ್ಮಿಕಾಂತ್ ಎಂಬಾತನನ್ನ ಪೊಲೀಸರು ವಷಕ್ಕೆ ಪಡೆದಿದ್ದಾರೆ. ಇನ್ನೂ ಇದೇ ನವೆಂಬರ್ 1 ರಂದು ಸಕ್ಕರ ಗ್ರಾಮದ ಗುಂಡಪ್ಪ ಅವರ ಜಮೀನಿನಲ್ಲಿ ಭೂತಣ್ಣ ಎಂಬುವವರು ಕಟ್ಟಿದ್ದ ಸುಮಾರು 120 ಕುರಿಗಳು ಕಳ್ಳತನವಾಗಿದ್ದು ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಿಸಿದ್ದು ಆರೋಪಿಯನ್ನ ಬಂಧಿಸಿದ್ದಾರೆ