ಶ್ರೀರಂಗಪಟ್ಟಣ: ಶ್ರೀ ರಂಗಪಟ್ಟಣದಲ್ಲಿ ಮದುವೆಯಾಗುವುದಾಗಿ ನಂಬಿಸಿ ಪರಿಶಿಷ್ಟ ಜಾತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಶ್ರೀ ರಂಗಪಟ್ಟಣದಲ್ಲಿ ಮದುವೆಯಾಗುವುದಾಗಿ ನಂಬಿಸಿ ಪರಿಶಿಷ್ಟ ಜಾತಿ ಯುವತಿ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀದರ್ ಮೂಲದ ಸುನೀಲ್ ಲೈಂಗಿಕ ದೌರ್ಜನ್ಯ ಎಸಗಿದವರು. ಪಟ್ಟಣದ ಪೂರ್ಣಯ್ಯ ಬೀದಿಯ ಟಿ.ಕೆ.ಶ್ವೇತಾ ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡಿದ್ದಾರೆ. ತನ್ನ ತಾಯಿಯ ಊರಿನವರಾದ ಸುನೀಲ್ ಅವರು ಎಫ್ ಡಿ ಎ ಯಾಗಿ ಕೆಲಸ ನಿರ್ವಹಿಸುತ್ತಿದ್ದು ಪೋನಿನ ಮೂಲಕ ಪರಿಚಯಸ್ಥರಾಗಿದ್ದರು. 2021ರಲ್ಲಿ ಪಟ್ಟಣಕ್ಕೆ ಬಂದಿದ್ದ ಅವರು ಸುಪ್ರಿಯಾ ಲಾಡ್ಜ್'ಗೆ ಕರೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ 2024ರ ಆಕ್ಟೋಬರ್'ನಲ್ಲಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದಿದ್ದಾರೆ.