ರಾಮನಗರ: ಬೈರಮಂಗಲ ಗ್ರಾಮದ ಬಳಿ ವಿಷ ಕುಡಿಯಲು ಮುಂದಾದ ರೈತ ಮಹಿಳೆಯರು
ವಿಷ ಕುಡಿಯಲು ಯತ್ನಿಸಿದ ರೈತ ಮಹಿಳೆಯರು. ಇಬ್ಬರು ರೈತ ಮಹಿಳೆಯರು ಹಾಗೂ ಓರ್ವ ರೈತನಿಂದ ಆತ್ಮಹತ್ಯೆಗೆ ಯತ್ನ. ಬೈರಮಂಗಲ ಗ್ರಾಮದಲ್ಲಿ ಮಂಗಳವಾರ ಘಟನೆ. ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ. ಯಾವುದೇ ಕಾರಣಕ್ಕೂ ಟೌನ್ ಶಿಪ್ ಗೆ ಜಮೀನು ಕೊಡಲ್ಲ ಎಂದು ಆಕ್ರೋಶ. ಈ ವೇಳೆ ಆತನ ಕೈಯಿಂದ ಕ್ರಿಮಿನಾಶಕದ ಬಾಟಲಿ ಕಿತ್ತು ಬಿಸಾಕಿದ ರೈತರು.ಕೂಡಲೇ ವಿಷ ಕುಡಿಯಲು ಯತ್ನಿಸಿದವರ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಕೂಡಲೇ ಮಧ್ಯಪ್ರವೇಶಿಸಿ ರೈತರ ಬಳಿ ಇದ್ದ ಕೀಟನಾಶಕಗಳನ್ನ ವಶಕ್ಕೆ ಪೊಲೀಸರು ಪಡೆದರು. ಆತ್ಮಹತ್ಯೆಗೆ ಯತ್ನಿಸಿದವರನ್ನ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು.