ಮಳವಳ್ಳಿ: ಪಟ್ಟಣದಲ್ಲಿ ನಡೆದ ಗ್ಯಾರೆಂಟಿ ಸಮಿತಿ ಸಭೆ, ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತರಲು ಅಧ್ಯಕ್ಷರಾದ ಮಾದೇಶ ಮನವಿ
ಮಳವಳ್ಳಿ : ಬರುವ ನವೆಂಬರ್ 3 ರಂದು ಮಂಡ್ಯದಲ್ಲಿ ಜರುಗಲಿರುವ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಮಳವಳ್ಳಿ ತಾಲ್ಲೂಕಿನಿಂದಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುವಿಗಳು ಆಗಮಿಸಬೇಕೆಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಮಹದೇವ ಮನವಿ ಮಾಡಿದ್ದಾರೆ. ಮಳವಳ್ಳಿ ಪಟ್ಟಣದ ತಾ ಪಂ ಸಭಾಂಗಣದಲ್ಲಿ ಗುರುವಾರ ಸಾಯಂಕಾಲ 5.30 ರ ಸಮಯ ದಲ್ಲಿ ಏರ್ಪಾಡಾಗಿದ್ದ ತಾಲ್ಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದಿನ ಸಭೆಗೆ ತಾಲ್ಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಕರೆ ತರಲು ಸಮಿತಿಯ ಸದಸ್ಯರು ಹಾಗೂ ಮುಖಂಡರು ಮುಂದಾಗಬೇಕೆಂದು ಕೋರಿದರು.