ಮೊಳಕಾಲ್ಮುರು:-ಗೌರಿ ಹುಣ್ಣಿಮೆ ಬಂದರೆ ಸಾಕು ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಗ್ರಾಮೀಣ ಪ್ರದೇಶದಲ್ಲಿ ಹುಣ್ಣಿಮೆ ಸಂಭ್ರಮ, ಸಡಗರ ಗರಿಗೆದರುತ್ತದೆ. ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಗೌರಿ ಹುಣ್ಣಿಮೆ ಆಚರಣೆ ವಿಶಿಷ್ಟವಾಗಿದ್ದು, ಎರಡು ದಿನ ಹುಣ್ಣಿಮೆ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಗೌರಮ್ಮ ದೇವಿ ಪ್ರತಿಷ್ಠಾಪಿಸಿ ಆರಾಧಿಸುವರು. ಹುಣ್ಣಿಮೆಯ ದಿನಕ್ಕೂ ಮೊದಲೇ ಗ್ರಾಮದ ಬಾಲಕಿಯರು ದೇವಸ್ಥಾನಕ್ಕೆ ಬಂದು ಆರತಿ ಬೆಳಗುವರು. ಹುಣ್ಣಿಮೆಯ ಸಂಜೆ ಗ್ರಾಮದ ಮಹಿಳೆಯರು ಗೌರಿ ಹಾಡುಗಳನ್ನು ಹಾಡುತ್ತ ಗೌರಮ್ಮ ದೇವಿಗೆ ಸಕ್ಕರೆ ಆರತಿ ಬೆಳಗುವರು.ಬಾಲಕಿಯರ ಕೋಲಾಟ ಪ್ರಮುಖ ಆಕರ್ಷಣೆಯಾಗಿತ್ತು.