ಮೈಸೂರು: ಹಳೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿರುವವರು ಸರ್ ಎಂ ವಿಶ್ವೇಶ್ವರಯ್ಯ: ನಗರದಲ್ಲಿ ಮಾಜಿ ಮಹಾಪೌರ ಸಂದೇಶ ಸ್ವಾಮಿ
Mysuru, Mysuru | Sep 15, 2025 ಕೆಎಂಪಿಕೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಭಾರತರತ್ನ ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ರವರ 165ನೇ ಜಯಂತಿ ಪ್ರಯುಕ್ತ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್. ಎಂ ವಿಶ್ವೇಶ್ವರಯ್ಯ ರವರ ವೃತ್ತದಲ್ಲಿ ಸರ್.ಎಂ ವಿ ನೆನಪು ಕಾರ್ಯಕ್ರಮ ಆಚರಿಸಲಾಯಿತು, ಮಾಜಿ ಮಾಹಾಪೌರರಾದ ಸಂದೇಶ್ ಸ್ವಾಮಿ ರವರು ಸರ್. ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು ನಂತರ ಸಂದೇಶ್ ಸ್ವಾಮಿ ರವರು ಮಾತನಾಡಿ ಆಧುನಿಕ ಮೈಸೂರನ್ನು ವಿಶ್ವಮಟ್ಟದಲ್ಲಿ ಜನಪ್ರಿಯವಾಗಲೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೊತೆಯಲ್ಲಿ ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ, ಸಹಕಾರಿ, ತಂತ್ರಾಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಯೋಜನೆಗಳನ್ನು ಜಾರಿಗೆ ತಂದರು.