ಕುಮಟಾ : ಡಿ.13 ರಿಂದ 15ರ ವರೆಗೆ ದಾಂಡಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕನ್ನಡಾಭಿಮಾನಿಗಳು ಹಾಗೂ ಸರ್ವ ಜನತೆ ಭಾಗವಹಿಸಿ 25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ರೋಹಿದಾಸ ನಾಯ್ಕ ಅವರು ಕರೆ ನೀಡಿದ್ದಾರೆ. ಅವರು ಶುಕ್ರವಾರ ಸಂಜೆ 4.00 ಗಂಟೆ ಸುಮಾರಿಗೆ ಕುಮಟಾದಲ್ಲಿ ಮಾಧ್ಯಮದ ಮೂಲಕ ಮಾತನಾಡುತ್ತಾ, ಈ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದ್ದು ನಾಡಿನ ಹಿರಿಯ ಸಾಹಿತಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.