ಮೊಳಕಾಲ್ಮುರು: ದೇವದಾಸಿಯರ ನಿಖರ ಸಂಖ್ಯೆ ತಿಳಿಯುವ ಉದ್ದೇಶದಿಂದ ಮರು ಸಮೀಕ್ಷೆ: ಪಟ್ಟಣದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪದ್ಮಾವತಿ
ಮೊಳಕಾಲ್ಮುರು:-ರಾಜ್ಯದಲ್ಲಿನ ದೇವದಾಸಿಯರ ನಿಖರ ಸಂಖ್ಯೆ ತಿಳಿಯುವ ಉದ್ದೇಶದಿಂದ ಈಗಾಗಲೇ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು. ಪಟ್ಟಣದ ಸಿಡಿಪಿಒ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ದೇವದಾಸಿಯರ ಮರು ಸಮೀಕ್ಷೆ ಪರಿಶೀಲನೆಯ ಪೋಷರ್ ಬಿಡುಗಡೆ ಮಾಡಿ ಮಾತನಾಡಿದರು. ರಾಜ್ಯದಲ್ಲಿನ ದೇವದಾಸಿಯರನ್ನು ಹಾಗೂ ಟಾನ್ಸ್ ಜಂಡರ್ ವ್ಯಕ್ತಿಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರನ್ನಾಗಿಸುವ ಸದುದ್ದೇಶ ಹೊಂದಲಾಗಿದೆ. ಈ ಸಂಬಂಧ ಬಜೆಟ್ನಲ್ಲಿ ಈಗಾಗಲೇ ಅನುದಾನ ಘೋಷಿಸಲಾಗಿದೆ ಎಂದರು.