ಹಾಸನ: ನಗರದ HIMS ಆಸ್ಪತ್ರೆಯಲ್ಲಿ ಮಹಾ ಯಡವಟ್ಟು: ರೋಗಿಯ ಎಡಗಾಲಿನ ರಾಡ್ ತೆಗೆಯಲು ಬಲಗಾಲಿಗೆ ಅಪರೇಷನ್
Hassan, Hassan | Sep 23, 2025 ಹಾಸನ: ಜಿಲ್ಲೆಯ ಸರ್ಕಾರಿ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಭಾರಿ ಯಡವಟ್ಟಾಗಿದ್ದು ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಬಲಗಾಲನ್ನು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಪ್ಪುದಿಂದ ರೋಗಿಗೆ ಎರಡು ಕಾಲುಗಳಿಗಾಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬುವರು ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಎಡಗಾಲಿಗೆ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ವೇಳೆ ವೈದ್ಯರು ಎಡಗಾಲಿನಲ್ಲಿ ರಾಡ್ ಅಳವಡಿಸಿದ್ದರು. ಇತ್ತೀಚೆಗೆ ಆ ರಾಡ್ನಿಂದ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ್ಯೋತಿ ಹಾಸನ ಹಿಮ್ಸ್ ಆಸ್ಪತ್ರೆಯ ಡಾ. ಸಂತೋಷ್ ಅವರ ಬಳಿ ಚಿಕಿತ್ಸೆಗಾಗಿ ಹೋದರು.ರಾಡ್ ತೆಗೆಯಲು ಶನಿವಾರ ಹೀಗಿದ್ದಾಗ ಈ ಘಟನೆ ನಡೆದಿದೆ