ಶಿಡ್ಲಘಟ್ಟ: ಯಣ್ಣಂಗೂರಿನಲ್ಲಿ ಮಳೆಯಿಂದ ನಷ್ಟವಾದ ಕ್ಯಾರೆಟ್ ಬೆಳೆ,ಕಂಗಾಲಾದ ರೈತ
ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದಲ್ಲಿ ರೈತ ಮಂಜುನಾಥ್ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಉತ್ತಮ ರೀತಿಯಲ್ಲಿ ಕ್ಯಾರೆಟ್ ಬೆಳೆಯನ್ನು ಬೆಳೆದಿದ್ದಾನೆ. ಆದರೆ ಇತ್ತೀಚಿಗೆ ಸುರಿದಂತಹ ಭಾರಿ ಮಳೆಯಿಂದಾಗಿ ಕ್ಯಾರೆಟ್ ಗಡ್ಡೆಗಳು, ಭೂಮಿಯ ಒಳಗಡೆ ಒಡದಿವೆ. ಇದರಿಂದಾಗಿ ಬೆಳೆಯನ್ನು ಖರೀದಿಸಲು ಬರುವಂತಹ ವರ್ತಕರು ಗಡ್ಡೆ ಒಡೆದಿರುವ ಕಾರಣ ಕಡಿಮೆ ಬೆಲೆಗೆ ವ್ಯಾಪಾರ ಮಾಡಲು ಮುಂದಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರೈತನ ನೆರವಿಗೆ ಸರಕಾರಗಳು ಬರಬೇಕೆಂದು ಇಂದು ರೈತ ಮನವಿಯನ್ನು ಮಾಡಿದ್ದಾರೆ.