ಸಾಗರ: ನಾಡಿನ ಒಂದು ಇಂಚು ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ, ಸಾಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ
Sagar, Shimoga | Nov 1, 2025 ಸಾಗರ ನಗರದ ನೆಹರೂ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ 60ನೇ ವರ್ಷದ ಕನ್ನಡ ರಾಜ್ಯೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಎಷ್ಟೇ ಸಮಸ್ಯೆಗಳು ಬರಲಿ ಏನೇ ಆಗಲಿ ಕನ್ನಡ ನಾಡಿನ ಒಂದು ಇಂಚು ಭೂಮಿ ಬೇರೆಯವರು ತೆಗೆದುಕೊಳ್ಳಲು ಬಿಟ್ಟು ಕೊಡುವ ಬೇರೆ ಮಾತೇ ಇಲ್ಲ. ಅದೇ ರೀತಿ ಕರ್ನಾಟಕದಲ್ಲಿ ಇರುವ ಎಲ್ಲಾ ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿ ಕನ್ನಡ ನೆಲ ಜಲಕಾಗಿ ಹೋರಾಟ ನಡೆಸುತ್ತಿರುವುದು ಸಂತೋಷಕರ ಎಲ್ಲಾ ಸಂಘಟನೆಯ ಹೋರಾಟಗಾರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.