ಚಾಮರಾಜನಗರ: ಬಡವರಿಗೆ ಬಾಯಿಲ್ಲ ಬಿಜೆಪಿಯವರು ಬಾಯಿ ಬಡಿದು ಕೊಳ್ಳುತ್ತಿದ್ದಾರೆ; ನಗರದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ಎಂ.ರೇವಣ್ಣ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿಯವರಿಗೆ ತಡೆಯೋಕೆ ಆಗ್ತಾಯಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ ಬಜೆಟ್ ನಲ್ಲಿ 52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ವಿಶ್ವ ಸಂಸ್ಥೆಯು ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನ ಮೆಚ್ಚಿಕೊಂಡಿದೆ ಎಂದು ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಇದೇ ಬೇರೆ ರಾಜ್ಯದಲ್ಲಿ ಅಧಿಕಾರವಿರುವ ಬಿಜೆಪಿಯವರು ಇದೇ ಯೋಜನೆಗಳನ್ನ ಬೇರೆ ಹೆಸರಿನಲ್ಲಿ ನಮ್ಮದೆ ಯೋಜನೆ ನೀಡಿದ್ದಾರೆ, ಬಡವರಿಗೆ ಬಾಯಿಲ್ಲ ಬಿಜೆಪಿಯವರು ಬಾಯಿ ಬಡೆದು ಕೊಳ್ಳುತ್ತಿದ್ದಾರೆ ಎಂದರು