ಚಡಚಣ: ಬ್ಯಾಂಕ್ ದರೋಡೆ ಪ್ರಕರಣ ಮ್ಯಾನೇಜರ್ ಕೊಟ್ಟ ದೂರಿನನ್ವಯ ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲು,
ಚಡಚಣ ಪಟ್ಟಣದಲ್ಲಿ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಸ್ ಬಿಐ ಮ್ಯಾನೇಜರ್ ತಾರಕೇಶ್ವರ ವೆಂಕಟೇಶ್ ದೂರಿನನ್ವಯ ಪ್ರಕರಣ ದಾಖಲಾಗಿದೆ. ಅಕೌಂಟ್ ಓಪನ್ ಮಾಡುವ ನೆಪದಲ್ಲಿ ಮೊದಲಿಗೆ ಓರ್ವ ಬ್ಯಾಂಕ್ ಗೆ ಎಂಟ್ರಿ. ಕೋವಿಡ್ ಮಾಸ್ಕ್ ಹಾಕಿಕೊಂಡು ಬಂದಿದ್ದ ವ್ಯಕ್ತಿ. ಫಾರ್ಮ್ ಸರಿಯಾಗಿ ಭರ್ತಿ ಮಾಡುವಂತೆ ಹೇಳಿದ್ದ ಮ್ಯಾನೇಜರ್. ಆಗ ಪಿಸ್ತೂಲು ಹಿಡಿದು ಹೆದರಿಸಿ ಹಣ ಕೊಡಿ ಇಲ್ಲವೆ ಸಾಯಿಸುವೆ ಎಂದಿದ್ದಾನೆ