ಹುಮ್ನಾಬಾದ್: ನಗರದಲ್ಲಿ ರಸ್ತೆತಡೆ ಪ್ರತಿಭಟನೆಗೆ ಮುಂದಾದ ರೈತರಿಗೆ ವ್ಯಾನ್ ನಲ್ಲಿ ಹೊತ್ತೊಯ್ದ ಪೊಲೀಸ್ ಅಧಿಕಾರಿಗಳು, ಎಸ್. ಪಿ ಭೇಟಿ
Homnabad, Bidar | Nov 12, 2025 ನಗರದಲ್ಲಿ ಕಬ್ಬಿನ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತ ಸಂಘಗಳ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಬುಧವಾರ ರಾಷ್ಟ್ರೀಯ ಹೆದ್ದಾರಿ 65 ರ ಮೇಲೆ ರಸ್ತೆರೆ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನ್ ನಲ್ಲಿ ಹೊತ್ತೊಯ್ದ ಪ್ರಸಂಗ ಬುಧವಾರ ಮಧ್ಯಾಹ್ನ 2ಕ್ಕೆ ನಡೆಯಿತು. ಈ ವೇಳೆ ರಸತೆಗೆ ಪ್ರತಿಭಟನೆಗೆ ಮುಂದಾದ ರೈತರನ್ನು ಹೆದ್ದಾರಿ ಯಿಂದ ಸ್ಥಳಾಂತರಿಸಲು ಖುದ್ದು ಎಸ್ ಪಿ ಪ್ರದೀಪ್ ಗುಂಟಿ ಸೇರಿದಂತೆ ಇತರೆ ಅಧಿಕಾರಿಗಳು ರಸ್ತೆಗಳಿದಿದ್ದರು.