ರಾಯಚೂರು: ಜಿಲ್ಲೆಯಾದ್ಯಂತ ಹತ್ತಿ ಬೆಳೆಗೆ ದೊಡ್ಡ ಲಾಸ್; ಲದ್ದಿಹುಳುಗಳ ಕಾಟಕ್ಕೆ ಒದ್ದಾಡುತ್ತಿದೆ ಹತ್ತಿ ಬೆಳೆ; ರೈತರಲ್ಲಿ ನಷ್ಟದ ಭೀತಿ
ಸೊಂಪಾಗಿ ಬೆಳೆದಿದ್ದ ಹತ್ತಿಗೆ ಲದ್ದಿ ಹುಳುಗಳ ಕಾಟ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ' ಎಂಬ ಕೊರಗು ರೈತರನ್ನು ಕಾಡುತ್ತಿದೆ. ಮುಂಗಾರು ಪ್ರವೇಶಕ್ಕೆ ಮುಂಚೆಯೇ ಈ ಬಾರಿ ವರುಣ ಅಬ್ಬರಿಸಿದ್ದ. ಇದರಿಂದ ರೈತರು ಹತ್ತಿ ಬಿತ್ತನೆಗೆ ಒತ್ತು ಕೊಟ್ಟಿದ್ದರು. ಹಾಗಾಗಿ , ಜಿಲ್ಲಾದ್ಯಂತ 1,72,800 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 1,86,703 ಹೆ . ಹತ್ತಿ ಬಿತ್ತನೆಯಾಗಿತ್ತು . ಇನ್ನೂ ಕೆಲ ದಿನಗಳಲ್ಲಿ ಕಾಯಿ ಒಡೆದು ಹೂ ಬಿಡುವ ಹಂತ ತಲುಪಿದ್ದ ಹತ್ತಿಗೆ ಇದೀಗ ಲದ್ದಿ ಹುಳುಗಳು ಮುತ್ತಿಕೊಂಡಿವೆ. ಕಳೆದ ಒಂದು ವಾರದಲ್ಲಿ ಜಿಲ್ಲಾದ್ಯಂತ ಶೇ.78 ರಷ್ಟು ವಾಡಿಕೆಗಿಂತ ಹೆಚ್ಚು ಮಳೆ ಸುರಿದು ವಾತಾವರಣ ತಂಪಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ರೈತ ಸಂಘದ ಅಧ