ಕಾರವಾರ: ನೌಕಾನೆಲೆಯಿಂದ ಕಾರವಾರ ಸಮುದ್ರ ವ್ಯಾಪ್ತಿಯಲ್ಲಿ ಸಮರಾಭ್ಯಾಸ ಮೀನುಗಾರಿಕೆಗೆ ನಿಷೇಧ:ನಗರದಲ್ಲಿ ಮೀನುಗಾರಿಕಾ ಇಲಾಖೆಯಿಂದ ಮಾಹಿತಿ
ಇಲ್ಲಿನ ಕಾರವಾರ ಸಮುದ್ರ ವ್ಯಾಪ್ತಿಯಲ್ಲಿ ನೌಕಾನೆಲೆಯ ಹಡಗು, ಸ್ ಮರಿನ್, ವಿಮಾನಗಳು ಅ.20ರವರೆಗೆ ಗುಂಡಿನ ದಾಳಿಯ ಸಮರಾಭ್ಯಾಸ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆ ರವಿವಾರ ಸಂಜೆ 6ಕ್ಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಮೀನುಗಾರರು ಇಲಾಖೆ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ.