ಕಾರವಾರ: ನಗರದ ದಿವೇಕರ ಕಾಲೇಜಿನ ಅಕ್ಕಪಕ್ಕ ಕಾಮಗಾರಿ ನಡೆಸಿದ ಕೋಸ್ಟ್ ಗಾರ್ಡ್ ಜನರಲ್ಲಿ ಆತಂಕ
ನಗರದ ಕಡಲತೀರಕ್ಕೆ ಹೊಂದಿಕೊಂಡಿರುವ ದಿವೇಕರ್ ಕಾಲೇಜಿನ ಅಕ್ಕಪಕ್ಕ ಕೋಸ್ಟ್ ಗಾರ್ಡ್ ನವರು ಮಂಗಳವಾರ ಮಧ್ಯಾಹ್ನ 1ರ ಸುಮಾರು ಕಾಮಗಾರಿ ನಡೆಸಿದ್ದು ಇಲ್ಲಿನ ಜನಶಕ್ತಿ ವೇದಿಕೆ ವಿರೋಧ ಮಾಡಿದೆ. ಈ ಹಿಂದೆ ಕೋಸ್ಟ್ ಗಾರ್ಡ್ ಕಚೇರಿ ನಿರ್ಮಾಣ ಮಾಡಿಬೇಕು ಎಂದು ಯೋಜನೆ ರೂಪಿಸಿತ್ತು. ಬಳಿಕ ಸ್ಥಳೀಯರು ವಿರೋಧ ಮಾಡಿದ್ದರು. ಈಗ ಮತ್ತೆ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬಂದು ಸರ್ವೇ ನಡೆಸಿದ್ದ ಸ್ಥಳದಲ್ಲಿ ಕಾಮಗಾರಿ ಕೈಗೊಂಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಎನ್.ಎಫ್ ನರೋನಾ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.