ಕೊಳ್ಳೇಗಾಲ: ಮಧುವನಹಳ್ಳಿ ಬಳಿ ಕಾರು ಪಲ್ಟಿ ಪ್ರಕರಣ ನೊಂದ ಐವರಲ್ಲಿ: ಓರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು
ಮಧುವನಹಳ್ಳಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ರಸ್ತೆ ಬದಿಗೆ ಕಾರು ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಐವರಲ್ಲಿ ಓರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಮಂಡ್ಯ ನಗರದ ನಿವಾಸಿಗಳಾದ ತಿಮ್ಮೇಗೌಡ, ಪ್ರಸಾದ್, ಎಂ.ಕೃಷ್ಣ(ಕಿಟ್ಟಿ), ಮಂಜುನಾಥ್ ಗಾಯಗೊಂಡವರಾಗಿದ್ದು, ಕೆಂಪರಾಜು ಮೃತ ದುರ್ದೈವಿ. ಗಾಯಗೊಂಡವರು ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಕಾರಿನಲ್ಲಿ ಶಬರಿಗೆ ತೆರಳಿದ್ದ ಐವರು ಮಹದೇಶ್ವರ ಬೆಟ್ಟಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ದೇವರ ದರ್ಶನ ಪಡೆದು ಮಂಡ್ಯಕ್ಕೆ ತೆರಳುತ್ತಿದ್ದ ವೇಳೆ ಮಧುವನಹಳ್ಳಿ ಗ್ರಾಮದ ಬಳಿ ಮಧ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟ