ಹಾಸನ: ಹಾಸನಾಂಬ ಉತ್ಸವದ ಕಾಮಗಾರಿಗಳಲ್ಲಿ ಅವ್ಯವಹಾರ ಆರೋಪ: ಮಹಾನಗರ ಪಾಲಿಕೆ ಎದುರು ದಲಿತ ಮುಖಂಡರ ಪ್ರತಿಭಟನೆ
Hassan, Hassan | Oct 5, 2025 ಹಾಸನ: ನಗರದ ಮಹಾನಗರ ಪಾಲಿಕೆ ವತಿಯಿಂದ ಹಾಸನಾಂಬ ಉತ್ಸವದ ಅಂಗವಾಗಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಾಲಿಕೆ ಎದುರು ಕೆಲ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.ಈ ವೇಳೆ ದಲಿತ ಮುಖಂಡ ದಿನೇಶ್ ಮಾತನಾಡಿ, ಮಹಾನಗರ ಪಾಲಿಕೆಯ ವತಿಯಿಂದ ರಸ್ತೆ ಗುಂಡಿ ಮುಚ್ಚುವ ಹಾಗೂ ರಸ್ತೆ ಕೆಲಸಗಳಲ್ಲಿ ಅವ್ಯವಹಾರ ನಡೆದಿದೆ ಅಲ್ಲದೆ ಜನರಿಗೆ ಯಾವುದೇ ಮಾಹಿತಿ ನೀಡದೆ ಗೌಪ್ಯತೆ ಕಾಪಡುತ್ತಿವುದು ಹಲವು ಅನುಮಾನಗಳಿಗೆ ಎಡೇ ಮಾಡಿಕೊಟ್ಟಿದೆ ಎಂದರು.ಮಹಾನಗರಪಾಲಿಕೆ ವತಿಯಿಂದ ಹಾಸನಾಂಬ ಉತ್ಸವಕ್ಕೆ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಮಗೆ ಮಾಹಿತಿ ನೀಡಬೇಕು ಇಲ್ಲವಾದರೆ ಸ್ಥಳದಲ್ಲೇ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು