ನರಸಿಂಹರಾಜಪುರ: ಗುಡ್ಡೆಹಳ್ಳಕ್ಕೆ ಬಂದಿಳಿದ ಆನೆಗಳು.! ನಾಳೆಯಿಂದ ಒಂಟಿ ಸಲಗ ಸೆರೆ ಕಾರ್ಯಾಚರಣೆ.!
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ, ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ ಮುಂತಾದ ಹಳ್ಳಿಗಳಲ್ಲಿ ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬಾಳೆ ಅಡಕೆ ಕಾಫಿ ತೋಟಗಳನ್ನ ನಾಶ ಮಾಡುತ್ತಿದ್ದ ಒಂಟಿ ಸಲಗ ಸೆರೆ ಕಾರ್ಯಾಚರಣೆ ನಾಳೆಯಿಂದ ಆರಂಭವಾಗಲಿದ್ದು. ಗುಡ್ಡೆ ಹಳ್ಳದ ಶಾಲೆಯ ಸಮೀಪದ ಮೈದಾನಕ್ಕೆ ಆರು ಆನೆಗಳು ಬಂದು ಇಳಿದಿದ್ದು, ನಾಳೆಯಿಂದ ಒಂಟಿ ಸಲಗ ಸರಕಾರಿ ಆಚರಣೆ ಆರಂಭವಾಗಲಿದೆ.