ಇಳಕಲ್: ಚಾಕು ಹಿಡಿದು ಇಳಕಲ್ ಪೋಲಿಸ್ ಠಾಣೆ ಮುಂದೆ ಹೈಡ್ರಾಮಾ
Ilkal, Bagalkot | Oct 19, 2025 ಪೋಲಿಸ್ ಠಾಣೆ ಮುಂದೆ ಕೈಯಿಗೆ ಕೊರಳಿಗೆ ಚಾಕು ಹಾಕಿಕೊಂಡು ಹೊಟ್ಟೆಗೆ ಚಾಕು ಹಿಡಿದುಕೊಂಡು ನನಗೆ ತಂದೆ ಬೇಕು ತಾಯಿ ಬೇಕು ಎಂದು ಹೈಡ್ರಾಮಾ ಮಾಡಿದ ಘಟನೆವೊಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ಪೋಲಿಸ್ ಠಾಣೆ ಮುಂದೆ ಅ.೧೮ ಶನಿವಾರ ರಾತ್ರಿ ೧೦ ಗಂಟೆಯ ಸಂದಭ೯ ನಡೆದಿದೆ. ಪೋಲಿಸ್ ಠಾಣೆಯ ಮುಂದೆಯೇ ಹೊಟ್ಟೆಯ ಮೇಲೆ ಚಾಕು ಹಿಡಿದುಕೊಂಡು ಅಲೆದಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ರಕ್ಷಣೆ ಮಾಡಲು ಹರಸಾಹಸ ಪಡುತ್ತಿದ್ದರು. ಯಾರಾದರೂ ಮುಂದೆ ಬಂದರೆ ಹೊಟ್ಟೆಗೆ ಚುಚ್ಚಿಕೋಳ್ಳುತ್ತೇನೆ ಎಂದು ಭಯವನ್ನು ಬೀಳಿಸುತ್ತಿದ್ದ, ವ್ಯಕ್ತಿಯನ್ನು ರಕ್ಷಣೆ ಮಾಡಲು ಪೋಲಿಸ್ ಇಲಾಖೆ ಸ್ಥಳೀಯ ನಾಗರಿಕರು ಹರಸಾಹಸ ಪಟ್ಟು ಅವನನ್ನು ಹಿಡಿದು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರು.