ಕಮಲಾಪುರ: ಪಟ್ಟಣದಲ್ಲಿ ಜ್ವಲಂತ ಸಮಸ್ಸೆ: ನಾಗರೀಕರ ಪ್ರತಿಭಟನೆ
ಕಮಲಾಪುರ ಪಟ್ಟಣದ ಜ್ವಲಂತ ಸಮಸ್ಸೆ ಪೂರೈಕೆಗಾಗಿ ಆಗ್ರಹಿಸಿ ತಹಶೀಲ್ದಾರ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ತಾಪಂ ಮಾಜಿ ಸದಸ್ಸ ಅಮೃತ್ ಗೌರೆ , ಸಿಬಿ ಪಾಟೀಲ್ ಓಕಳಿ, ಮೈನುದ್ದೀನ್ ಗುಳಿ, ಅಲೋಕ್ ಗೌರೆ, ಅಮರ್ನಾಥ್ ಪಾಟ್ನಾಯಕ್, ರಾಣೋಜಿ ಗೌರೆ, ಪ್ರಜ್ವಲ್ ಚಕ್ರವರ್ತಿ, ಬಾಬಾ ಚಿಟಗುಪ್ಪ, ಆಸೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸೋಮವಾರ 2 ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿ, ಕಮಲಾಪುರ ಮಾರ್ಗವಾಗಿ ತೆರಳುವ ಎಲ್ಲಾ ರೈಲು ಹಾಗೂ ಬಸ್ ಗಳ ನಿಲ್ಲುಗಡೆ, ಪಟ್ಟಣದಲ್ಲಿ ಹದಗೆಟ್ಟ ರಸ್ತೆ ದುರಸ್ಥೆ, ಪಪಂ ವಾರ್ಡ್ಗಳ ಚುನಾವಣೆಗೆ ಪ್ರಕಟಿಸಲಾದ ಮಿಸಲಾತಿಗೆ ಅಕ್ಷೇಪಣೆ ಸಲ್ಲಿಸಿದ್ದು ತಕ್ಷಣ ಉತ್ತರ ನೀಡಬೇಕು. ಅತಿವೃಷ್ಟಿಗೆ ಹಾಳಾದ ಬೆಳೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು...