ದೊಡ್ಡಬಳ್ಳಾಪುರ: ಟಿಎಪಿಎಂಸಿಎಸ್ ಮತದಾನದಲ್ಲಿ ಏರುಪೇರು ಆರೋಪ ಮರು ಮತದಾನಕ್ಕೆ ಪರಾಜಿತ ಅಭ್ಯರ್ಥಿ ಒತ್ತಾಯ
ಟಿಎಪಿಎಂಸಿಎಸ್ ಮತದಾನದಲ್ಲಿ ಏರುಪೇರು: ಮತದಾನ ಏರುಪೇರಿಗೆ ಪ್ರತಿಸ್ಪರ್ಧಿ ಏಜೆಂಟ್ ಗಳೇ ಕಾರಣ: ಮರು ಮತದಾನಕ್ಕೆ ಪರಾಜಿತ ಅಭ್ಯರ್ಥಿ ನರಸಿಂಹ ಮೂರ್ತಿ ಒತ್ತಾಯ ದೊಡ್ಡಬಳ್ಳಾಪುರ ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನ.2ರಂದು ನಡೆಯಿತು. ಈ ಚುನಾವಣೆಯಲ್ಲಿ ಕೆಲವೊಂದು ಬೂತ್ ಗಳಲ್ಲಿ ನಮ್ಮ ಏಜೆಂಟ್ ಗಳು ಇರಲಿಲ್ಲ. ವಯೋವೃದ್ಧರು ಮತದಾನ ಮಾಡುವಾಗ ಗೊಂದಲದಲ್ಲಿದ್ದಾಗ ಬೇರೆ ಏಜೆಂಟರ್ ಗಳು ಬಂದು ಮತದಾನ ಮಾಡಿಸಿದ್ದಾರೆ. ಆಗ ಮತದಾನದಲ್ಲಿ ಏರುಪೇರಾಗಿ ನಾನು ಸೋತಿದ್ದೇನೆ ಎಂದು ಎಚ್ ನರಸಿಂಹ ಮೂರ್ತಿ ಆರೋಪ ಮಾಡಿದ್ದಾರೆ.