ಗೃಹ ಸಚಿವ ಪರಮೇಶ್ವರ್ ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮೈಸೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ತನಿಖೆಯಲ್ಲಿ ಬಲೂನುಗಳನ್ನ ಮಾರುತ್ತಿದ್ದವನು, ಹೀಲಿಯಂ ಸಿಲಿಂಡರ್ ಇಟ್ಕೊಂಡಿದ್ದ ಅಂತ ಇದೆ. ಅವನು ಲಕ್ನೋ ಮೂಲದವನು ಅಂತ ಇದೆ. ಇದು ಯಾವ ರೀತಿ ಆಗಿದೆ ಎಂದು ಇನ್ವೆಸ್ಟಿಗೇಶನ್ ಆಗ್ತಿದೆ. ನಾನು ರಿಪೋರ್ಟ್ ಕೊಡಿ ಅಂತ ಹೇಳಿದ್ದೇನೆ. ಅವನಿಗೆ ಹೀಲಿಯಂ ಸಿಲಿಂಡರ್ ಹೇಗೆ ಸಿಕ್ತು ಅದರ ಬಗ್ಗೆ ತನಿಖೆ ಮಾಡುವಂತೆ ಹೇಳಿದ್ದೇನೆ. ಸ್ಪೋಟಗೊಂಡ ಜಾಗದಲ್ಲಿ ಟೂರಿಸ್ಟ್ ಬರ್ತಾರೆ. ಓಪನ್ ಸ್ಪೇಸ್ ನಲ್ಲಿ ಸಿಲಿಂಡರ್ ಬಳಕೆ ಹೇಗೆ ಆಯ್ತು ಇದೆಲ್ಲದರ ಬಗ್ಗೆ ವರದಿ ಬಂದ ಮೇಲೆ ಗೊತ್ತಾಗುತ್ತೆ ಎಂದರು.