ಬೆಂಗಳೂರು ಉತ್ತರ: ಬರೋಬ್ಬರಿ 3. 36 ಕೋಟಿ ಮೌಲ್ಯದ ಮೊಬೈಲ್ ಪೊಲೀಸರಿಂದ ವಶ
ಬೆಂಗಳೂರಿನಲ್ಲಿ ಬಸ್ಗಳಲ್ಲಿ ಮೊಬೈಲ್ ಕದಿಯುತ್ತಿದ್ದ ಗ್ಯಾಂಗ್ವೊಂದರ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, 894 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಮಾಂಡ್ ಸೆಂಟರ್ ಸಿಬ್ಬಂದಿಗಳು ಸಿಇಐಆರ್ ಪೋರ್ಟಲ್ ಮೂಲಕ ಕಳೆದು ಹೋದ ಮೊಬೈಲ್ಗಳನ್ನು ಪತ್ತೆಹಚ್ಚಿದ್ದಾರೆ. ಐಎಂಇಐ ನಂಬರ್ ಅಪ್ಲೋಡ್ ಮಾಡಿದ ನಂತರ ಸಿಮ್ ಬಳಸಿದಾಗ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 3.36 ಕೋಟಿ ರೂ. ಮೌಲ್ಯದ 1,949 ಮೊಬೈಲ್ಗಳು ವಶಕ್ಕೆ ಪಡೆದು, 42 ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳರಿಂದ ಮೊಬೈಲ್ ಖರೀದಿಸಿದವರೇ ಹೆಚ್ಚಾಗಿ ಸಿಕ್ಕಿರುವುದರಿಂದ, ದಾಖಲೆಗಳಿಲ್ಲದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.