ಬೆಂಗಳೂರು ಉತ್ತರ: ತಾಯಿಯನ್ನು ಬೈದಿದ್ದಕ್ಕೆ ಕೊಲೆ ಮಾಡಿ ಪೊಲೀಸರಿಗೆ ಶರಣಾದ ವ್ಯಕ್ತಿ ಡಿಸಿಪಿ ಪ್ರತಿಕ್ರಿಯೆ
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲದಲ್ಲಿ ತಾಯಿಗೆ ಬೈದಿದ್ದಕ್ಕೆ ಮಗನಿಂದ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಅವರು ಇಂದು ಉಳ್ಳಾಲದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಕುಡಿದು ಮನೆಗೆ ಬಂದಿದ್ದ ಅವಿನಾಶ್ ತನ್ನ ತಾಯಿಗೆ ಕೆಟ್ಟದಾಗಿ ಬೈದಿದ್ದರಿಂದ, ಆತನ ತಾಯಿ ಮಗ ಕಾರ್ತಿಕ್ ಗೆ ಕರೆ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ಕಾರ್ತಿಕ್, ಬೈಕ್ ರಾಡ್ ನಿಂದ ಅವಿನಾಶ್ ತಲೆಗೆ ಹೊಡೆದಿದ್ದು, ಪರಿಣಾಮವಾಗಿ ಅವಿನಾಶ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಆರೋಪಿ ಕಾರ್ತಿಕ್ ತಾನೇ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆತನನ್ನು