ಹಾಸನ: ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಅಗ್ನಿಹೋತ್ರ
Hassan, Hassan | Oct 5, 2025 ನಗರದ ಹಾಸನಾಂಬೆ ದೇವಾಲಯ ರಸ್ತೆಯಲ್ಲಿ ಇರುವ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ವೇದಭಾರತೀ ಹಾಗೂ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ “ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರ ನಡೆಯಿತು.” ಕಾರ್ಯಕ್ರಮದಲ್ಲಿಪತಂಜಲಿ ಯೋಗ ಪೀಠದ ವರಿಷ್ಠ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನ್ನಾಡಿ, ಮುಂದಿನ ದಿನಗಳಲ್ಲಿ ಮನೆಮನೆಗೆ ಅಗ್ನಿಹೋತ್ರ ಮತ್ತು ಯೋಗಾಭ್ಯಾಸ ತಲುಪಿಸಿ, ‘ಯೋಗಾಮಯ ಕರ್ನಾಟಕ’, ‘ಯೋಗಯುಕ್ತ ಕರ್ನಾಟಕ’ ಹಾಗೂ ‘ರೋಗಮುಕ್ತ ಕರ್ನಾಟಕ’ ನಿರ್ಮಾಣಕ್ಕೆ ಪತಂಜಲಿ ಯೋಗ ಪೀಠದಿಂದ ಚಾಲನೆ ನೀಡಲಾಗುತ್ತದೆ ಎಂದರೂ.