ನಾಗಮಂಗಲ: ನಾಗಮಂಗಲದಲ್ಲಿ ಪುರಸಭೆ ಪೌರಕಾರ್ಮಿಕ ಜಾತಿ ನಿಂದನೆ ಮಾಡಿ ಹಲ್ಲೆ, ದೂರು ದಾಖಲು
ನಾಗಮಂಗಲ ಪುರಸಭೆಯ ಪೌರಕಾರ್ಮಿಕ ನೌಕರ ಆದಿ ದ್ರಾವಿಡ ಜನಾಂಗದ ಡ್ರೈವರ್ ರಮೇಶ್ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಸಂಭಂದ 60 ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ಪೌರಕಾರ್ಮಿಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಹಲ್ಲೆ ನಡೆಸಿದ ಖಾದರ್ ಪಾಷ ಎಂಬುವರ ಮೇಲೆ ದೂರು ದಾಖಲಿಸಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಪೌರಕಾರ್ಮಿಕ ಡ್ರೈವರ್ ರಮೇಶ್ ಬೆಳಿಗ್ಗೆ ಎಂದಿನಂತೆ ಮೈಸೂರು ರಸ್ತೆಯ ಯಾ ಅಲ್ಲಾಹ್ ಮಸೀದಿ ಪಕ್ಕದಲ್ಲಿ ಕಸ ಸಂಗ್ರಹಕ್ಕೆ ಹೋಗಿದ್ದಾರೆ ಆ ಸಮಯದಲ್ಲಿ ಚಿಕ್ಕದೊಂದು ಚೀಲವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಖಾದರ್ ಪಾಷ ಏಕವಚನ ಪದಪ್ರಯೋಗ ಮಾಡಿ ಜಾತಿ ನಿಂದನೆ ಮಾಡುವ ಮೂಲಕ ಹಲ್ಲೆ ನಡೆಸಿದ್ದಾರೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.