ಮಳವಳ್ಳಿ: ಮಳವಳ್ಳಿ ಪೊಲೀಸ್ ಉಪ ವಿಭಾಗದ ನೂತನ ಡಿವೈಎಸ್ಪಿ ಯಾಗಿ ಎಸ್ ಬಿ ಯಶವಂತ ಕುಮಾರ ಅವರಿಂದ ಅಧಿಕಾರ ಸ್ವೀಕಾರ
ಮಳವಳ್ಳಿ : ಮಳವಳ್ಳಿ ಪೊಲೀಸ್ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ಎಸ್ ಬಿ ಯಶವಂತ ಕುಮಾರ ಅವರು ತಮ್ಮ ಅಧಿಕಾರ ವಹಿಸಿ ಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಉಪ ವಿಭಾಗದ ಡಿ ವೈ ಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಅವರನ್ನು ಬೆಂಗಳೂರಿನ ಎಸ್ ಟಿ ಎಫ್ ಗೆ ವರ್ಗಾಯಿಸಲಾಗಿದ್ದು ತೆರವಾದ ಸ್ಥಾನಕ್ಕೆ ಎಸ್ ಬಿ ಯಶವಂತ ಕುಮಾರ ಅವರನ್ನು ನೇಮಕ ಮಾಡಲಾಗಿದೆ. ಬುಧವಾರ ಸಾಯಂಕಾಲ 5.30 ರ ಸಮಯದಲ್ಲಿ ಇವರು ತಮ್ಮ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವರೆಗೆ ಕೊಪ್ಪಳದ ಕ್ರೈಂ ಸೆಲ್ ವಿಭಾಗದಲ್ಲಿ ಡಿವೈಎಸ್ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಶವಂತ ಕುಮಾರ ಅವರು ಸೇವೆಗೆ ಸೇರಿದ ನಂತರ ಮೊದಲು ಉಪ ವಿಭಾಗದ ಡಿವೈಎಸ್ಪಿಯಾಗಿ ಮಳವಳ್ಳಿಗೆ ನೇಮಕಗೊಂಡಿದ್ದಾರೆ.