ರಾಯಚೂರು: ಸುಲ್ತಾನಪುರ ಶ್ರೀ ಪಂಚಾಕ್ಷರಿ ಬ್ರಹನ್ಮಠದಲ್ಲಿ ಪುರಾಣ ಪ್ರವಚನ ಸಮಾರೋಪ; ಮಾಜಿ ಶಾಸಕ ಭಾಗಿ
ತಾಲೂಕಿನ ಸುಕ್ಷೇತ್ರ ಸುಲ್ತಾನಪುರ ಗ್ರಾಮದ ಶ್ರೀ ಪಂಚಾಕ್ಷರಿ ಬೃಹನ್ಮಠದಲ್ಲಿ ಗುರುವಾರ ನವರಾತ್ರಿ ಹಬ್ಬದ ಕೊನೆಯ ದಿವಸ ವಿಜಯ ದಶಮಿ ದಿನದಂದು ಪುರಾಣ ಪ್ರವಚನ ಸಮಾರೋಪ ಸಮಾರಂಭ ಜರುಗಿತು. ಬ್ರಹನ್ಮಠದ ಶ್ರೀಗಳಾದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳೆದ ಒಂಭತ್ತ ದಿವಸಗಳ ಕಾಲ ಜರುಗಿದ ಶರನ್ನವರಾತ್ರಿ ಧಾರ್ಮಿಕ ಮತ್ತು ಪುರಾಣ ಪ್ರವಚನ ಕಾರ್ಯಕ್ರಮಗಳ ಸಮಾರೋಪ ಸಮಾರಂಭಕ್ಕೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಭಾಗವಹಿಸಿ, ಶ್ರೀ ಮಠಕ್ಕೆ ಮೊದಲಿನಿಂದಲೂ ನಡೆದುಕೊಳ್ಳುತ್ತಿದ್ದೇವೆ. ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.