ಜೋಯಿಡಾ : ತಾಲೂಕಿನ ಪಣಸೋಲಿ - ಕುಳಗಿ ರಸ್ತೆಯ ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಶನಿವಾರ ಸಂಜೆ 5.30 ಗಙಟೆ ಸುಮಾರಿಗೆ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಜೋಯಿಡಾ ತಾಲೂಕಿನ ಪಣಸೋಲಿಯ ಆನೆ ಶಿಬಿರಕ್ಕೆ ಹೋಗಿ ಹಿಂದುರುಗಿ ಬರುವಾಗ ಪ್ರವಾಸಿಗರಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದಾರೆ. :