ಕಾರವಾರ: ಆಶಾ ಕಾರ್ಯಕರ್ತೆಯರಿಗೆ ಬಾಕಿ ವೇತನ ಕೂಡಲೇ ಪಾವತಿಸಿ : ನಗರದಲ್ಲಿ ಜಿಪಂ ಸಿಇಒ ಮೂಲಕ ಸರಕಾರಕ್ಕೆ ಮನವಿ
ನಗರದಲ್ಲಿ ಬುಧವಾರ ಮಧ್ಯಾಹ್ನ 3ಕ್ಕೆ ಆಶಾ ಕಾರ್ಯಕರ್ತೆಯರು ಜಿಪಂ ಸಿಇಒ ಡಾ. ದಿಲೀಷ್ ಶಶಿ ಅವರನ್ನು ಭೇಟಿಯಾಗಿ ಆಶಾ ಕಾರ್ಯಕರ್ತೆಯರಿಗೆ ಕಳೆದ ಆರು ತಿಂಗಳಿನಿಂದ ಬರೆದಿರುವ ಕೇಂದ್ರದ ಪ್ರೋತ್ಸಾಹ ಧನ, ಎರಡು ತಿಂಗಳ ರಾಜ್ಯ ಸರ್ಕಾರದ ನಿಗದಿತ ಗೌರವಧನ ಬಾಕಿ ಇರುವುದನ್ನು ಕೂಡಲೇ ಪಾವತಿಸಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಲಗೆಗಾರರಾದ ಗಂಗಾಧರ್ ಬಡಿಗೇರ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.