ಚಳ್ಳಕೆರೆ: ಚಳ್ಳಕೆರೆ ಡಿಗ್ರಿ ಕಾಲೇಜ್ ಮರಗಳ ಮಾರಾಣ ಹೋಮ: ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕುಮಾರ್ ಸ್ವಾಮಿ ಭೇಟಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಎಚ್.ಪಿಪಿಸಿ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ನೂರಾರು ಮರಗಳ ಮಾರಣ ಹೋಮ ಮಾಡಿರುವ ಘಟನೆಗೆ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ 4 ಗಂಟೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಭೇಟಿ ನೀಡಿದ್ದರು. ಇದೇ ವೇಳೆ ರಸ್ತೆ ಅಭಿವೃದ್ಧಿ ಹೆಸರಲ್ಲಿ ರ ಮರಗಳನ್ನ ಕಡಿದು ಹಾಕಿರುವುದನ್ನ ವೀಕ್ಷಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇದೇ ವೇಳೆ ಮಾತನಾಡಿದ ಅವರು ಚಳ್ಳಕೆರೆ ಶಾಸಕರು ಕಟ್ಟಿದ ಕಾಲೇಜು ಕಟ್ಟಡ ರಸ್ತೆಗೆ ಕಾಣುತ್ತಿಲ್ಲ ಎಂಬ ಕಾರಣಕ್ಕೆ ದುರುದ್ದೇಶದಿಂದ ನೂರಾರು ಮರಗಳನ್ನ ಬಲಿ ಕೊಟ್ಟಿದ್ದಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಶಾಸಕರಿಗೆ ಗಮನ ಹರಿಸುತ್ತಿಲ್ಲ, ವಿಧ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕುಂಠಿತವಾಗುತ್ತಿದೆ ಎಂದರು