ಕೃಷ್ಣರಾಜಪೇಟೆ: ತೆಂಡೇಕೆರೆ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರ ಸ್ಥಳಾಂತರಕ್ಕೆ ಗ್ರಾಮಸ್ಥರ ವಿರೋಧ
ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸ್ಥಳಾಂತರ ಮಾಡಿದರೆ ಉಗ್ರಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಕೆ ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆಯಲ್ಲಿರುವ ರೈತಸಂಪರ್ಕ ಕೇಂದ್ರವನ್ನು ತೆಂಡೇಕೆರೆಯಿಂದ ಶೀಳನೆರೆ ಗ್ರಾಮಕ್ಕೆ ಸ್ಥಳಾಂತರ ಮಾಡಲು ಕೆಲವು ಮುಖಂಡರು ಹುನ್ನಾರ ನಡೆಸುತ್ತಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರು ಅವರು ಮನ್ನಣೆ ನೀಡಬಾರದೆಂದು ಆಗ್ರಹಿಸಿದರು. ಈಗಾಗಲೇ ರೈತಸಂಪರ್ಕ ಕೇಂದ್ರಕ್ಕೆ ಹತ್ತು ಗುಂಟೆ ಜಾಗ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಗುದ್ದಲಿಪೂಜೆ ಮಾತ್ರ ಬಾಕಿಯಿದ್ದು ತೆಂಡೇಕೆರೆಯಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಸೋಮವಾರ ಬೆಳಿಗ್ಗೆ 11 ಗಂಟೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.