ಉತ್ತರಪಿನಾಕಿನಿ ನದಿ ಒತ್ತುವರಿಯಿಂದ ಕಾಲುವೆಗಳಾಗಿ ಮಾರ್ಪಾಡಾದ ನದಿ ಮಂಚೇನಹಳ್ಳಿಯಲ್ಲಿ ನದಿ ಒತ್ತುವರಿ ತೆರವುಗೊಳಿಸಲು ರೈತರು ಮನವಿ
Manchenahalli, Chikkaballapur | Sep 27, 2025
ಮಂಚೇನಹಳ್ಳಿ ಇಂದ ಹಾದುಹೋಗುವ ಉತ್ತರ ಪಿನಾಕರಿ ನದಿಯು ಇತಿಹಾಸ ಪ್ರಸಿದ್ಧವಾದ ನದಿಯಾಗಿದ್ದು ಇದು ಅತಿ ದೊಡ್ಡ ನದಿಯಾಗಿ ಮಂಚೇನಹಳ್ಳಿ ಇಂದ ಗೌರಿಬಿದನೂರು ಹಿಂದೂಪುರ ಸೇರಿದಂತೆ ಇಂದು ಮಹಾಸಾಗರವನ್ನು ಸೇರುತ್ತದೆ ಎಂದು ಮೂಲಗಳು ಹೇಳುತ್ತವೆ. ಆದರೆ ಈಗ ಸುರಿಯುತ್ತಿರುವ ಭಾರಿ ಮಳೆಗೆ ನದಿಯು ಈಗ ತನ್ನ ಸುತ್ತಳತೆಯನ್ನು ಕಳೆದುಕೊಂಡು ಕಾಲುವೆಯಂತೆ ಮಾರ್ಪಾಟಾಗಿದೆ ಕಾರಣ..ಈ ನದಿಯ ಆಜುಬಾಜುನಲ್ಲಿ ತ್ಯಾಜ್ಯಗಳನ್ನು ಸುರಿಯುವುದು.. ನದಿ ಎಲ್ಲಾ ಒತ್ತುವರಿ ಮಾಡಿಕೊಂಡು ಈಗಾಗಲೇ ಕಟ್ಟಡಗಳು ತಮಗಿಷ್ಟಾನುಚಾರವಾಗಿ ನದಿಯನ್ನು ಮುಚ್ಚಿ ಹಾಕಿರುತ್ತಾರೆ..