ಚಿತ್ರದುರ್ಗ: ಚಿತ್ರದುರ್ಗ ರೇಣುಕಾಸ್ವಾಮಿ ಮನೆಗೆ ಶಾಸಕ ಟಿ.ರಘುಮೂರ್ತಿ ಭೇಟಿ: 1 ಲಕ್ಷ ಸಹಾಯ
ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾಗಿದ್ದ ರೇಣುಕಸ್ವಾಮಿ ಅವರ ಚಿತ್ರದುರ್ಗದ ಮನೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭಾನುವಾರ ಸಂಜೆ 6 ಗಂಟೆಗೆ ಭೇಟಿ ನೀಡಿದ್ದಾರೆ. ಮೃತ ರೇಣುಕಸ್ವಾಮಿ ಕುಟುಂಬಸ್ಥರ ಯೋಗಕ್ಷೇಮ ವಿಚಾರಣೆ ಮಾಡಿ ಸಾಂತ್ವಾನ ಹೇಳಿದರು. ಅಲ್ಲದೆ ಇದೇ ವೇಳೆ ವೈಯಕ್ತಿಕವಾಗಿ ರೇಣುಕಾಸ್ವಾಮಿ ಕುಟುಂಬಸ್ಥರಿಗೆ 1ಲಕ್ಷ ಆರ್ಥಿಕ ಸಹಾಯ ಕೂಡಾ ಮಾಡಿದರು. ಶಾಸಕ ರಘುಮೂರ್ತಿಗೆ ಸರ್ಕಾರಿ ನೌಕರಿ ಬಗ್ಗೆ ರೇಣುಕಾಸ್ವಾಮಿ ಪೊಷಕರು ಮನವಿ ಮಾಡಿದರು. ಈ ವೇಳೆ ಸರ್ಕಾರ ಹಾಗೂ ಸಿಎಂಗೆ ವಿಷಯ ತಿಳಿಸಿ ಚರ್ಚಿಸುವುದಾಗಿ ಭರವಸೆ ನೀಡಿದರು. ಈ ವೇಳೆ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್, ತಾಯಿ ರತ್ನಪ್ರಭ ಸೇರಿ ಹಲವರಿದ್ದರು