ಶಿರಸಿ: ಬನವಾಸಿ ಭಾಗದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಶಾಸಕ ಹೆಬ್ಬಾರ್ ಭಾಗಿ, ಗುಡ್ನಾಪುರ ಕೆರೆಗೆ ಬಾಗಿನ ಅರ್ಪಣೆ
ಶಿರಸಿ : ತಾಲೂಕಿನ ಪುರಣಾ ಪ್ರಸಿದ್ಧ ಗುಡ್ನಾಪುರ ಕೆರೆಗೆ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ಬಾಗೀನ ಸಮರ್ಪಿಸಿದರು. ಗುಡ್ನಾಪುರದ ಬಂಗಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಮಳೆಯಿಂದ ಕೆರೆಯು ಭರ್ತಿಯಾದ ಕಾರಣ ವರ್ಷದ ಸಂಪ್ರದಾಯದಂಗೆ ಬಾಗೀನ ನೀಡಲಾಯಿತು. ಬಳಿಕ ಬನವಾಸಿಯ ಪದವಿಪೂರ್ವ ಕಾಲೇಜಿನ ನೂತನ ಕೊಠಡಿಯನ್ನು ಶಾಸಕ ಹೆಬ್ಬಾರ್ ಉದ್ಘಾಟಿಸಿದರು. ನಂತರ ಹಲಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂತನ ಸ್ತ್ರೀ ಶಕ್ತಿ ಸಂಘದ ಕಟ್ಟಡವನ್ನು ಉದ್ಘಾಟಿಸಿ ಶುಭ ಕೋರಿದರು. ವಿವಿಧ ಇಲಾಖೆಗಳ ಅಧಿಕಾರಿಗಳಯ, ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು.