ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಸಂ.ಪ್ರ.ಕಾರ್ಯದರ್ಶಿ ಸಂತೋಷ್ ಬೇಟಿ
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದಲ್ಲಿ ಶನಿವಾರ (ಸೆ 27) ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪಾಲ್ಗೊಂಡಿದ್ದರು. ಅಧ್ಯಾತ್ಮ ಎನ್ನುವುದು ಮುದ್ದೇನಹಳ್ಳಿಯಲ್ಲಿ ಕೇವಲ ಉಪದೇಶವಾಗಿ ಉಳಿದಿಲ್ಲ. ಅನುದಿನದ ಜೀವನ ಪದ್ಧತಿಯೇ ಆಗಿದೆ. ಸಮಾಜದ ಎಲ್ಲ ಮುಖಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದ ಸೇವಾ ಚಟುವಟಿಕೆಗಳು ಸ್ಪರ್ಶಿಸುತ್ತಿವೆ' ಎಂದು ಬಣ್ಣಿಸಿದರು.