ಭಾಷಾ ಅಧ್ಯಯನವನ್ನು ಕಡೆಗಣಿಸಲಾಗುತ್ತಿದ್ದು, ಪಠ್ಯಪುಸ್ತಕಗಳು ಕೇವಲ ಪುಸ್ತಕಗಳಾಗುತ್ತಿರುವುದು ಬೇಸರದ ಸಂಗತಿ ಎಂದು ಸಾಹಿತ್ಯ ಚಿಂತಕ ಡಾ. ಎಚ್.ಎನ್.ಮುರಳಿಧರ ಹೇಳಿದರು. ನಗರದ ಶುಕ್ರವಾರ ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ "ನಮ್ಮ ಭಾಷಾ ಪಠ್ಯಪುಸ್ತಕಗಳು ಹಾಗೂ ಭಾಷಾ ಸಂವೇದನೆ' ಕುರಿತು ಮಾತನಾಡಿದರು.