ಕಾರವಾರ: ನೌಕಾಪಡೆ ಮತ್ತು ಪೊಲೀಸರಿಂದ ಬೃಹತ್ ಅಣಕು ಬಾಂಬ್ ಪತ್ತೆ ಕಾರ್ಯಾಚರಣೆ ಯಶಸ್ವಿ
ಕರಾವಳಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವ ಹಾಗೂ ವಿವಿಧ ಭದ್ರತಾ ಏಜೆನ್ಸಿಗಳ ನಡುವಿನ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ಗುರುವಾರ ಸಂಜೆ 6ರವರೆಗೆ ಕಾರವಾರ ನಗರದಲ್ಲಿ ಬೃಹತ್ 'ಬಾಂಬ್ ಪತ್ತೆ ಅಣಕು ಕಾರ್ಯಾಚರಣೆ'ಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ನೌಕಾಪಡೆ, ತಟರಕ್ಷಕ ಪಡೆ, ಕರಾವಳಿ ಕಾವಲು ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಒಂದಾಗಿ ಪಾಲ್ಗೊಂಡಿದ್ದವು.