ಹಾವೇರಿ: ಮುಳ್ತಳ್ಳಿ ಬಳಿ ರಸ್ತೆ ಅಪಘಾತ, ಸ್ಥಳದಲ್ಲೇ ಸವಾರ ಸಾವು
Haveri, Haveri | Oct 21, 2026 ಹಾವೇರಿ ತಾಲೂಕಿನ ಮುಳ್ತಳ್ಳಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಹಿರೇ ಲಿಂಗದಹಳ್ಳಿ ಗ್ರಾಮದ ಚಿಕ್ಕಪ್ಪ ಶಿವಜಪ್ಪ ಮಳಗಿ ಎಂಬುವವರು ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.