ಮುಧೋಳ: ನಿರಂತರ ಮಳೆಗೆ ಲೋಕಾಪುರದಲ್ಲಿ ಮೂವತ್ತು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ನೀರುಪಾಲು, ರೈತರು ಕಂಗಾಲು
ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರ ಮಳೆ.ಕೆರೆಯಂತಾದ ರೈತರ ಜಮೀನುಗಳು, ಕಂಗಾಲಾದ ರೈತರು.ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿ.ಲೋಕಾಪುರ ಸುತ್ತಮುತ್ತಲಿನ ಜಮಿಗಳಲ್ಲಿ ಬೆಳೆ ಹಾನಿ.ಮುಧೋಳ ತಾಲೂಕಿನ ಲೋಕಾಪುರ.ನಿರಂತರ ಮಳೆ ಹಾಗೂ ವ್ಯತಿರಿಕ್ತ ಹವಾಮಾನದಿಂದ ನೆಲಕಚ್ಚಿದ ಬೆಳೆಗಳು.ಕೆಲವೆಡೆ ಫಸಲು ಬಂದು ಈರುಳ್ಳಿ ಕಿತ್ತು ಇಟ್ಟಿದ್ದ ರೈತರು. ಜಮೀನಿನಲ್ಲಿದ್ದ ಈರುಳ್ಳಿ ಫಸಲು ಸಂಪೂರ್ಣ ನೀರುಪಾಲು. ಲೋಕಣ್ಣ ಕತ್ತಿ ಎಂಬುವವರಿಗೆ ಸೇರಿದ ಈರುಳ್ಳಿ.ಸುಮಾರು 30 ಎಕರೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶ.ಸರಕಾರದ ಪರಿಹಾರದತ್ತ ರೈತರ ನಿರೀಕ್ಷೆ.