ಮಳವಳ್ಳಿ: ಪಟ್ಟಣದಲ್ಲಿ ಶಾಸಕರ ಹೇಳಿಕೆ, ದೇಶದ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಕೈಗೊಂಬೆಯಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ನರೇಂದ್ರಸ್ವಾಮಿ
ಮಳವಳ್ಳಿ : ದೇಶದ ಅತ್ಯುನ್ನತ ಸ್ವಾಯತ್ತ ಸಂಸ್ಥೆಗಳು ಆಡಳಿತಾ ರೂಢ ಸರ್ಕಾರದ ಕೈಗೊಂಬೆಯಾ ಗುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪೇಟೆ ವೃತ್ತದಲ್ಲಿ ಲೋಕ ಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವ ದಲ್ಲಿ ನಡೆಸುತ್ತಿರುವ ವೋಟ್ ಚೋರಿ ಅಭಿಯಾನಕ್ಕೆ ಬೆಂಬಲ ವಾಗಿ ಭಾನುವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನರ ತೀರ್ಪಿನಂತೆ ಸುಭದ್ರ ಸರ್ಕಾರ ರಚನೆ ಮಾಡಬೇಕಾದ ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ ಎಂದು ಟೀಕಿಸಿದರು.