ಚಿಟಗುಪ್ಪ: ಲಘುಭೂಕಂಪ ಯಾರೂ ಆತಂಕ ಪಡುವ ಅಗತ್ಯವಿಲ್ಲ: ಕುಡಂಬಲ್ ಗ್ರಾಮದಲ್ಲಿ ತಹಶೀಲ್ದಾರ್ ಮಂಜುನಾಥ ಪಂಚಾಳ್
ಲಘು ಭೂಕಂಪ ಹಿನ್ನೆಲೆಯಲ್ಲಿ ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಮಂಜುನಾಥ್ ಅವರು ಅಭಯವನ್ನು ನೀಡಿದರು. ತಾಲೂಕಿನ ಕೋಡಂಬುಲ್ ಹಾಗೂ ಚಿಟ್ಗುಪ್ಪ ಪಟ್ಟಣದ ಭಾಸ್ಕರ ನಗರದಲ್ಲಿ ಗುರುವಾರ ರಾತ್ರಿ ಲಘು ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 11:30 ಕ್ಕೆ ಕೋಡಂಬಲ್ ಹಾಗೂ ಭಾಸ್ಕರ್ ನಗರಕ್ಕೆ ಭೇಟಿನೀಡಿ ಅಭಯ ನೀಡಿದರು. ಸಿಪಿಐ ಶ್ರೀನಿವಾಸ್ ಅಲ್ಲಾಪುರ್, ಪಿಎಸ್ಐ ಬಸವಲಿಂಗಪ್ಪ ಗೋ ಡಿಹಾಳ್ ಮತ್ತಿತರರು ಇದ್ದರು.